Friday, December 31, 2010

ಕಂಡದ್ದನ್ನು ಕಂಡ ಹಾಗೆ

ಕಂಡದ್ದನ್ನು ಕಂಡ ಹಾಗೇ
ಹೇಳುತ್ತೇನೆ ಎನ್ನುವಾಗ
ನಾನು ಹಳಬರನ್ನು
ನೆನೆಯುತ್ತೇನೆ.

ಒಂದಷ್ಟು ಜನ ಹಾಗೇ
ಹೇಳಿ ಹೆಸರು ಪಡೆದಿದ್ದಾರೆ..
ಹೇಳದೇ’ ಹಣವನ್ನೂ
ಮಾಡಿದ್ದಾರೆ..

ತೂಕವನ್ನು ಹಾಕಿ ನೋಡಿದರೆ
ಇಬ್ಬರೂ ಪೆನ್ನಿಗೆ
ಚೂರಿ ಹಾಕಿದವರೇ..!
ಬರೆದೋ ಇಲ್ಲವೇ ಗೀಚಿ
ಹೇಳಿದ್ದೆ ಸತ್ಯ
ಎನಿಸುವಂತೆ ಕಾಣಿಸುತ್ತಾರೆ
ಆದರವರ ಸತ್ಯ ಒಗಟಾಗಿರದೇ
ಇದ್ದುದರಿಂದ ಎಲ್ಲರೂ ಒಪ್ಪಿಕೊಳ್ಳುತ್ತಾರೆ
ನಾನೂ ಒಪ್ಪುತ್ತೇನೆ
ಏಕೆಂದರೆ ಸತ್ಯ ಎಂಬುದು ಒಗಟಂತೆ..!
ಅದನ್ನು ಬಿಡಿಸಲು
ಅರ್ಥ ಮಾಡಿಕೊಳ್ಳಲು
ತಾಳ್ಮೆ ಯಾರಿಗೂ ಇಲ್ಲಾ ನೋಡಿ..

ಗುಬ್ಬಿಯೇ ಕಾಡುಪಾಲಾದ ಮೇಲೆ 
ದುರ್ಬೀನು ಹಾಕಿ ಅದ
ಹುಡುಕಿದರೇನು ಪ್ರಯೋಜನ
ಇನ್ನಲ್ಲಿ ತರಂಗಗಳ ಆಟಾಟೋಪ ಅಷ್ಟೇ..
ಆದರೆ ಅವೂ ಕಾಣುವುದಿಲ್ಲ ನೋಡಿ 
ಅದಕ್ಕೆ ಕಣ್ಣ ಪಸೆ ಅಂಚಿನಲ್ಲಿದೆ

ಮಣ್ಣ ವಾಸನೆ ಎಲ್ಲರಿಗೀಗ ಇಷ್ಟ
ಧೂಳ  ಕುಡಿವಂತೆ
ಬಗೆದು ಮೊಸುತ್ತಾರೆ
ಕಣ್ಣ ಒಡ್ಡಿ
ಕೆಸರುಮಾಡಿಕೊಳ್ಳುತ್ತಾರೆ.
ಕಣ್ಣ ಕೆಸರಲಿ ಹೂ ಅರಳಿಸಲು ನೋಡುತ್ತಾರೆ.
ಅಲ್ಲಿ ಹೂವರಳುವುದಿಲ್ಲ ಎಂಬುದು ಸತ್ಯ ನೋಡಿ..

ಮನ’ಸ್ಪೆಕ್ಟ್ರಂ’ಗಳಲ್ಲಿ ಕನಸು ಕಾಣುತ್ತಾರೆ
ಭೂಕಂಪನ ಸೃಷ್ಟಿಸಿ ಧೂಳ್  ಸಹಿತ
ಕಂಪನಗಳೇಳಿಸಿ 
ನೋಟುಗಳ ಉದುರಿಸುತ್ತಾರೆ.
ಸತ್ಯ ನಿಮಗೆ ಒಗಟಂತೆ ಕಾಣುವುದಿಲ್ಲ
ಏಕೆಂದರೆ ನಿಮಗೆ ಅದ
 ಓರೆ ಹಚ್ಚಿ ನೋಡುವ ತಾಳ್ಮೆ ಇಲ್ಲಾ ನೋಡಿ
ಬರಿ ಕೈಗೆ ಕೆಲಸಕೊಟ್ಟು
ನಿರುಮ್ಮಳಾಗಿದ್ದೀರಿ ನೋಟುಗಳುದುರಿಸುವ
ನೋಟ ನಿಮ್ಮದಲ್ಲವೆ..
ಸತ್ಯ ಒಗಟು ನನಗೆ
ನಿಮಗೆ, ಕಂಡಷ್ಟು ಧೂಳು ಇಣುಕಿದಷ್ಟು
ನೋಟಿನ ಕಂತೆಗಳು........  





1 comment: